ॐ

Sri Annapoorneshwari Temple

Beedu Badi · Padu Grama · Kaup
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಬೀಡು ಬದಿ · ಪಡು ಗ್ರಾಮ · ಕಾಪು

Welcome to Sri Annapoorneshwari Temple, Beedu Badi, Padu Grama, Kaup.

Sri Annapoorneshwari Devi
ಶ್ರೀ ಅನ್ನಪೂರ್ಣೇಶ್ವರಿ
ದೇವಸ್ಥಾನದ ಬಗ್ಗೆ

ದೇವಾಲಯದ ಬಗ್ಗೆ

✦

ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ಸಾನಿಧ್ಯದಲ್ಲಿ ಸುಮಾರು 50 ವರ್ಷಗಳಿಂದ ದಿ|| ಗೋವಿಂದ ಎಸ್. ಕೋಟ್ಯಾನ್‌ರವರು ಊರ ಮತ್ತು ಪರವೂರಿನ ಸಮಸ್ತ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಶ್ರೀ ಅನ್ನಪೂರ್ಣೇಶ್ವರೀ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಹಾಗೂ ಅನ್ನಸಂತರ್ಪಣೆಯನ್ನು ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಅಮ್ಮನವರ ಸಾನಿಧ್ಯದಲ್ಲಿ ಪ್ರತೀ ಶುಕ್ರವಾರದಂದು ಭಜನೆ, ವರ್ಷಂಪ್ರತಿ ದೀಪೋತ್ಸವ ಹಾಗೂ ಹೂವಿನ ಪೂಜೆಯನ್ನು ನಡೆಸಿಕೊಂಡು ಬರಲಾಯಿತು. ದಿ|| ಗೋವಿಂದ ಎಸ್. ಕೋಟ್ಯಾನ್‌ರವರ ಆಶಯದಂತೆ ದೇವಸ್ಥಾನದ ಆಡಳಿತವನ್ನು ಸುಸಜ್ಜಿತವಾಗಿ ನಡೆಸುವ ಘನ ಉದ್ದೇಶದಿಂದ ಶ್ರೀ ದೇವಿಯ ಸರ್ವ ಭಕ್ತರೂ ಸೇರಿ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ ಸೇವಾ ಸಮಿತಿ (ರಿ.) ಬೀಡುಬದಿ ಕಾಪು ಈ ನಿರ್ವಹಣಾ ಸಮಿತಿಯನ್ನು ದಿನಾಂಕ 20.10.2016 ರಂದು ರಚಿಸಿಕೊಳ್ಳಲಾಯಿತು. ತದನಂತರ ಅಮ್ಮನವರ ಸಾನಿಧ್ಯದಲ್ಲಿ ವೇದಮೂರ್ತಿ ಶ್ರೀ ಕೃಷ್ಣ ಭಟ್, ಖ್ಯಾತ ಜ್ಯೋತಿಷ್ಯರು ಮಂಜೇಶ್ವರ ಇವರ ನೇತೃತ್ವದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಪರಿಹಾರ ಕಾರ್ಯದ ಬಗ್ಗೆ ವಿಷಯ ಪ್ರಸ್ತಾಪಗೊಂಡು ಪರಿಹಾರ ಕಾರ್ಯಗಳು ಒಂದು ಹಂತಕ್ಕೆ ಬಂದಿರುತ್ತದೆ. ಹಾಗೆಯೇ ಇನ್ನಳಿದ ಜೀರ್ಣೋದ್ಧಾರದ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ನಡೆಯುವುದರಿಂದ ಅದಕ್ಕೆ ಪೂರ್ವಭಾವಿ ಸಿದ್ಧತೆಯಾಗಿ ಜೀರ್ಣೋದ್ಧಾರ ನಿಧಿ ಸ್ಥಾಪಿಸಲಾಗಿದ್ದು ಇದರ ನಿರ್ವಹಣಾ ಸಮಿತಿಯನ್ನು ಈಗಾಗಲೇ ರಚಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಕೆನರಾ ಬ್ಯಾಂಕ್‌ನಲ್ಲಿ ತೆರೆಯಲಾಗಿದೆ. ಹಾಗೂ ಇದರ ಮಾಹಿತಿಯನ್ನು ದಾನಿಗಳಿಗೆ ಸುಲಭವಾಗಿ ತಲುಪಿಸಲು ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ. ತಾವೆಲ್ಲರೂ ಕೂಡ ಈ ಸತ್ಕಾರ್ಯದಲ್ಲಿ ಭಾಗವಹಿಸಿ ಶ್ರೀ ಅನ್ನಪೂರ್ಣೇಶ್ವರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇವೆ.

ಅಧ್ಯಕ್ಷರು ಮತ್ತು ಸರ್ವಸದಸ್ಯರು ಶ್ರೀ ಅನ್ನಪೂರ್ಣೇಶ್ವರೀ ನಿಧಿ ಸಮಿತಿಬೀಡುಬದಿ, ಕಾಪು ಪಡು

ಪೂಜಾ ಸಮಯ ಮತ್ತು ಸೇವೆಗಳು

Pooja timings & Sevas

✦

Daily timings

Pooja / darshanTime
ಬೆಳಗಿನ ಪೂಜೆ7:00 AM
ಸಂಜೆ ಪೂಜೆ7:00 PM

Sevas

SevaOffering
ಕರ್ಪೂದಾರತಿ₹ 10/-
ಕುಂಕುಮಾರ್ಚನೆ₹ 20/-
ಕಲ್ಪೋಕ್ತ ಪೂಜೆ₹ 100/-
ಹೂವಿನ ಪೂಜೆ₹ 100/-
ಅಷ್ಟೋತ್ತರ ಅರ್ಚನೆ₹ 150/-
ಬಿಲ್ವ ಪತ್ರಾರ್ಚನೆ₹ 150/-
ಹರಿವಾಣ / ನೈವೇದ್ಯ ಸೇವೆ –₹ 150/-
ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ₹ 200/-
ಗುಡಾನ್ನ ಪೂಜೆ₹ 300/-
ಭಜನಾ ಸೇವೆ₹ 2,000/-
ಸರ್ವಸೇವೆ₹ 2,500/-
ರಂಗಪೂಜೆ₹ 5,000/-
ಅನ್ನದಾನ ಸೇವೆ₹ 5,000/-
ಚಂಡಿಕಾಹೋಮ
ಯಾಗ ಹಾಗೂ ಪೂಜಾ ಬಾಬು ಹೊರತುಪಡಿಸಿ
₹ 10,000/-
ಸುವಾಸಿನಿ ಪೂಜೆ₹ 1,500/-
ಸಂಪರ್ಕ

Visit & contact

✦
📍

Address

ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಬೀಡು ಬದಿ · ಪಡು ಗ್ರಾಮ · ಕಾಪು 574106 ಉಡುಪಿ ಜಿಲ್ಲೆ

📞

Phone & email

9036741746, 8867696878

WhatsApp

🕉

Temple hours

9:00 AM to 6:00 PM